ಗಗನ್ ಶ್ರೀನಿವಾಸ್, ಡಾ ಬ್ರೋ ( ) ಎಂದು ಜನಪ್ರಿಯವಾಗಿದ್ದಾರೆ. ಇವರು ಭಾರತದ ದೇಶದ ಕರ್ನಾಟಕ ಮೂಲದ ಯೂಟ್ಯೂಬರ್ ಮತ್ತು ಟ್ರಾವೆಲ್ ವ್ಲಾಗರ್ ಆಗಿದ್ದಾರೆ. == ವೈಯಕ್ತಿಕ ಜೀವನ == ಗಗನ್ ಶ್ರೀನಿವಾಸ್ (ಜನನ ೨೧ ಅಕ್ಟೋಬರ್ ೨೦೦೦) ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸ್ ದೇವಾಲಯದಲ್ಲಿ ಅರ್ಚಕರಾಗಿದ್ದರೆ, ತಾಯಿ ಪದ್ಮಾವತಿ ಗೃಹಿಣಿ ಆಗಿದ್ದಾರೆ. ಗಗನ್‌ಗೆ ಶಿಕ್ಷಣದಲ್ಲಿ ಆಸಕ್ತಿ ಇರಲಿಲ್ಲ, ಆದರೆ ಇವರು ಶಾಲಾ ದಿನಗಳಲ್ಲಿ ನಾಟಕ, ಭಾಷಣ ಮತ್ತು ಹಾಡುಗಳಂತಹ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. === ಶಿಕ್ಷಣ === ಇವರು 1 ರಿಂದ 10 ನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದರು. ಪ್ರಥಮ ಪಿಯು ವಿಜ್ಞಾನ ಅನುತ್ತೀರ್ಣವಾಗಿದ್ದರು. ನಂತರ ಇವರು ನೆಲಮಂಗಲದ ಬಸವೇಶ್ವರ ಕಾಲೇಜಿನಲ್ಲಿ ವಾಣಿಜ್ಯದಲ್ಲಿ ಪದವಿಪೂರ್ವವನ್ನು ಮುಗಿಸಿದರು. ನಂತರ ಕೆ.ಆರ್.ಪುರದ ವಿಶ್ವೇಶ್ವರಪುರ ಕಾಲೇಜಿನ ಬಿಕಾಂನಲ್ಲಿ 2021ರಲ್ಲಿ ಪದವಿಯನ್ನು ಪಡೆದರು. == ವೃತ್ತಿ == ಗಗನ್ ತಮ್ಮ 17 ನೇ ವಯಸ್ಸಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಬೆಂಗಳೂರಿನಲ್ಲಿ ಡ್ರೈವಿಂಗ್ ಕೆಲಸವನ್ನು ಸಹ ಮಾಡುತ್ತಿದ್ದರು. ನಂತರ ಅವರು ತಮ್ಮ ಕೆಲಸವನ್ನು ತೊರೆದು, ತಮ್ಮದೇ ಆದ ವ್ಯವಹಾರವನ್ನು ಪ್ರಾರಂಭಿಸಿದರು. ಅವರು ಮನೆಯಲ್ಲಿ ತಯಾರಿಸಿದ ಉತ್ಪನ್ನವನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ನಂತರ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. === ಯೂಟ್ಯೂಬ್ === ಗಗನ್ ಶ್ರೀನಿವಾಸ್ 2018 ರಲ್ಲಿ ಡಾ.ಬ್ರೋ ಎಂಬ ಹೆಸರಿನಲ್ಲಿ ಹೊಸ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಮಾಡಿದರು. ಆರಂಭದ ದಿನಗಳಲ್ಲಿ ಹಾಸ್ಯ ವೀಡಿಯೊಗಳು ಮತ್ತು ಸಂದರ್ಶನ ವೀಡಿಯೊಗಳನ್ನು ಮಾಡುತ್ತಿದ್ದರು, ನಂತರ ಅವರು ಕರ್ನಾಟಕದಲ್ಲಿ ಮಾತ್ರ ವ್ಲಾಗ್ ಮಾಡಲು ಪ್ರಾರಂಭಿಸಿದರು. ಇವರು ನಿಧಾನವಾಗಿ ಭಾರತದೆಲ್ಲೆಡೆ ವ್ಲಾಗ್ ಮಾಡಲು ಪ್ರಾರಂಭಿಸಿದರು. ಮೊದಲಿಗೆ ಭಾರತ ರಾಜ್ಯಗಳಾದ ಕೇರಳ, ಅಸ್ಸಾಂ, ರಾಜಸ್ಥಾನ, ಹಿಮಾಚಲ ಪ್ರದೇಶ ಇತ್ಯಾದಿಗಳಿಗೆ ಭೇಟಿ ನೀಡಿದ್ದರು. ಇವರು ಕನ್ನಡದಲ್ಲಿ ಮಾತನಾಡುವ ಶೈಲಿಗೆ ಬಹಳ ಪ್ರಸಿದ್ಧರಾಗಿದ್ದಾರೆ. ಇವರು ಯಾವಾಗಲೂ ನಮಸ್ಕಾರ ದೇವರು ಎನ್ನುತ್ತ ತಮ್ಮ ವ್ಲಾಗ್ ಅನ್ನು ಪ್ರಾರಂಭಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಇವರು ವ್ಲಾಗ್ ಮಾಡಲು ವಿದೇಶಗಳಿಗೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ. ಮೊದಲ ವಿದೇಶಿ ಪ್ರವಾಸ ಪಾಕಿಸ್ತಾನ ದೇಶವಾಗಿದೆ. ನಂತರ ಇವರು ದುಬೈ, ಥೈಲ್ಯಾಂಡ್, ರಷ್ಯಾ, ಅಫ್ಘಾನಿಸ್ತಾನ, ಮತ್ತು ಆಫ್ರಿಕಾ ಮುಂತಾದ ಅನೇಕ ವಿದೇಶಗಳಿಗೆ ಭೇಟಿ ನೀಡಿದ್ದರು. ಡಾ.ಬ್ರೋ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದು ಮಾತ್ರವಲ್ಲ, ತಾಲಿಬಾನ್ ಜೊತೆ ವ್ಲಾಗ್ ಅನ್ನು ಮಾಡಿದ್ದಾರೆ. ಇಂಗ್ಲಿಷ್ ಸರಿಯಾಗಿ ಗೊತ್ತಿಲ್ಲದಿದ್ದರೂ ವಿದೇಶ ಪ್ರವಾಸ ಮಾಡಬಹುದು ಎಂದು ಅವರು ತೋರಿಸಿದ್ದಾರೆ. === ಸಿನಿಮಾ === ಡೇರ್‌ಡೆವಿಲ್ ಮುಸ್ತಾಫಾ ಕನ್ನಡ ಚಲನಚಿತ್ರದ ಟ್ರೈಲರ್‌ಗೆ ಕಂಠದಾನ ಮಾಡಿದ್ದಾರೆ. == ಬಾಹ್ಯಕೊಂಡಿಗಳು == ಇನ್ಸ್ಟಾಗ್ರಾಮ್‌ನಲ್ಲಿ ಡ್ರಾ ಬ್ರೋ ಕನ್ನಡ ಟ್ವಿಟ್ಟರ್‌ನಲ್ಲಿ ಡಾಬ್ರೋ ಕನ್ನಡ ಫೇಸ್‌ಬುಕ್‌ನಲ್ಲಿ ಡಾಬ್ರೋ ಕನ್ನಡ ಯೂಟ್ಯೂಬರ್ ಡಾಬ್ರೋ ವಿಜಯವಾಣಿಗೆ ನೀಡಿದ ಸಂದರ್ಶನ ಯೂಟ್ಯೂಬ್‌ನಲ್ಲಿ == ಉಲ್ಲೇಖಗಳು ==